ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರಿನಲ್ಲಿರುವ ಒಂದು ಕ್ರೀಡಾಂಗಣ. ಪ್ರಮುಖವಾಗಿ ಇಲ್ಲಿ ಫುಟ್ಬಾಲ್ ಆಟವನ್ನಾಡಲಾಗುತ್ತದೆ. ಕ್ರೀಡಾಂಗಣವು 24,000 ಜನ ಪ್ರೇಕ್ಷಕರ ಸಾಮರ್ತ್ಯ ಹೊಂದಿದೆ. ಇದು ಎರಡು ಹೊರಾಂಗಣ ರಾಕ್ ಕ್ಲೈಂಬಿಂಗ್ ಗೋಡೆಗಳು, ಒಡುವ ಟ್ರ್ಯಾಕ್, ಫುಟ್ಬಾಲ್ ಮೈದಾನ ಮತ್ತು ವಾಲಿಬಾಲ್ ಅಂಗಣಗಳನ್ನು ಹೊಂದಿದೆ. ಈ ಕ್ರೀಡಾಂಗಣವನ್ನು ರೂ. 220 ಮಿಲಿಯನ್ ವೆಚ್ಚದಲ್ಲಿ ಎಸ್ ವಿ ಈ ಸಿ ಕನ್ಸ್ಟ್ರಕ್ಶನ್ಸ್ ಲಿಮಿಟೆಡ್ ಮೂಲಕ ನಿರ್ಮಿಸಿ ,31 ಮೇ 1997 ರಲ್ಲಿ ಪೂರ್ಣಗೊಂಡಿತು. == ಕೇಂದ್ರ ಕಣ == ಕ್ರೀಡಾಂಗಣದ ಕೇಂದ್ರ ಕಣದಲ್ಲಿ 8-ಪಥದ 400 ಮೀ ಸಿನ್ಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಇದೆ ಹಾಗು ಬಯಲುಕ್ರೀಡೆಗಳಾದತಹ ಉದ್ದಜಿಗಿತ, ಎತ್ತರಜಿಗಿತ, ಟ್ರಿಪಲ್ ಜಂಪ್ ಮತ್ತು ಪೊಲ್ ವಾಲ್ಟ್ ಕಣವನ್ನು ಹೊಂದಿದೆ. ಅಥ್ಲೆಟಿಕ್ ಟ್ರ್ಯಾಕ್ನ ಒಳಗಡೆ 100ಮೀ 68ಮೀ ಅಳತೆಯ ಫುಟ್ಬಾಲ್ ಮೈದಾನವಿದೆ. == ಬೆಂಗಳೂರು ಎಫ್ ಸಿ == ಈ ಕ್ರೀಡಾಂಗಣವು ಪ್ರಸ್ತುತ ಬೆಂಗಳೂರು ಎಫ್ ಸಿ ತಂಡದ ತವರು ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ. == ಇದನ್ನು ಸಹ ನೋಡಿ == ಕಂಠೀರವ ಒಳಾಂಗಣ ಕ್ರೀಡಾಂಗಣ ಬೆಂಗಳೂರು ಎಫ್ ಸಿ ವೆಸ್ಟ್ ಬ್ಲಾಕ್ ಬ್ಲೂಸ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==